ಚಿತ್ರ: ಯಕ್ಷಗಾನ ವೇಷದಾರಿಗಳು
"ನಮ್ಮ ಬೆಂಗಳೂರು ಹಬ್ಬ ಬರಿಯ ಬೆಂಗಳೂರು ಉತ್ಸವ ಮಾತ್ರವಲ್ಲ ಇದು ಬೆಂಗಳೂರು ನಗರದ ಬೆಳವಣಿಗೆ ಹಾಗೂ ಉದ್ಯಾನನಗರಿಯ ಸಂಸ್ಕೃತಿಯ ಶ್ರೀಮಂತಿಕೆಯ ಮೇಲೆ ಬೆಳಕು ಚೆಲ್ಲಲಿದೆ. ಎರಡು ದಿನಗಳ ಕಾಲ ವಿಜೃಂಭಣೆಯಿಂದಲೇ ಉತ್ಸವವನ್ನು ಆಯೋಜಿಸಲಾಯಿತು.ನೃತ್ಯ, ನಾಟಕ, ಕಲೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಬೆಂಗಳೂರು ಹಬ್ಬದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬೈಕರ್ ಕ್ಲಬ್ಗಳನ್ನು ಆಹ್ವಾನಿಸಲಾಯಿತು. ಸುಮಾರು 30 ಕ್ಕೂ ಹೆಚ್ಚು ಕ್ಲಬ್ಗಳು ಈ ಹಬ್ಬದಲ್ಲಿ ಪಾಲ್ಗೊಂಡರು ಬೆಂಗಳೂರಿನ 8 ದಿಕ್ಕಿನಿಂದ ಬೈಕ್ ಜಾಥಾ ಬೆಳಿಗ್ಗೆ ಶುರು ಮಾಡಿ ಸುಮಾರು 9:30-10 ಗಂಟಗೆ ವಿಧಾನಸೌಧ, cubbon ಪಾರ್ಕಿನಲ್ಲಿ ಸೇರಿದರು ಈ ಹಬ್ಬದಲ್ಲಿ ರಾಜ್ಯದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದರು. ಕಲಾವಿದರು, ಚಲನಚಿತ್ರಗಳು ಮತ್ತು ಆಹಾರದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಹಬ್ಬವಾಗಿತ್ತು. ಬೆಂಗಳೂರಿನ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜಯನಗರ ಸಾಮ್ರಾಜ್ಯದ ದೊರೆ ನಾಡಪ್ರಭು ಕೆಂಪೇಗೌಡರಿಗೆ ಈ ಬೆಂಗಳೂರು ಹಬ್ಬದ ಮೂಲಕ ಗೌರವ ನೀಡಲಾಯಿತು.
ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೋಲಿಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೋಡಿ ಬಹಳ ಮನಸ್ಸಿಗೆ ಖುಷಿ ನೀಡಿತು.
ನಮ್ಮ ಬೆಂಗಳೂರು, ನಮ್ಮ ಹೆಮ್ಮೆ.
.
.
.
#bangalore #karnataka #india #bengaluru #mysore #kannada #instagram #sandalwood #love #photography #fashion #instagood #trending #bangalorediaries #kannadaactress #bangalorefoodies #insta #travel #nammabengaluru #karnatakatourism #follow #nature #kannadadubsmash #official #kannadamusically #photooftheday #bangaloreblogger