ಹೌದು, ನಿನ್ನೆ ಕಾರ್ಯನಿಮಿತ್ತ ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಸ್ಯಾಂಕಿ ಕೆರೆ ಕಡೆ ಹೋಗಿದ್ದೆ ಅವರು ಇಲ್ಲೇ ಸಿಗೋಣ ಅಂತ ಹೇಳಿದ್ರು. ಸರಿ ಅಲ್ಲಿ ಕೆರೆ ಅಂಗಳದಲ್ಲಿ ಅವರ ಭೇಟಿಗೆ ಕಾಯುತ್ತಿರುವಾಗ ಕನ್ನಡ ಭಾವುಟದ ಕಂಬ ಕಣ್ಣಿಗೆ ಕಂಡಿತು ಸುತ್ತ ಸಾವಿರಾರು ಜನ ವಾಯು ವಿಹಾರಿಗಳು ಬೇರೆ ಕಾರ್ಯದಲ್ಲಿ ತೊಡಗಿದ್ದರು. ಹಾಗೆ ನಮ್ಮ ಸ್ನೇಹಿತರನ್ನು ಇದೆ ಕಂಬದ ಬಳಿ ಬರಲು ಹೇಳಿದೆ ಸುಲಭದ ಗುರುತಿಗಾಗಿ ಬಂದ ತಕ್ಷಣ ಯೋಗಕ್ಷೇಮ ವಿಚಾರಿಸಿ ಏನ್ ಸರ್ ಕಂಬ ಇದೆ ಭಾವುಟನೆ ಇಲ್ಲಾ ಅಂದೇ ಅವರು ಅಸಹಾಯಕರಾಗಿ ನಕ್ಕು ನಮ್ಮ ಮಾತು ಕಥೆ ಮುಗಿಸಿ ಹೊರಡುವ ಮುನ್ನ ಮೊಬೈಲ್ ಬ್ಯಾಟರಿ ಕಮ್ಮಿ ಇದ್ರೂ ಒಂದು ಫೋಟೋ ತೊಗೊಂಡೆಬಿಟ್ಟೆ.
ಇಂದು ಭಾನುವಾರ ಕಾಡು ಮಲ್ಲೇಶ್ವರ ದೇವಸ್ಥಾನನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ನಮ್ಮ ಸ್ನೇಹಿತರಾದ ಯಶಸ್ವಿನಿಯವರಿಂದ ಆಹ್ವಾನ ಇದ್ದ ಕಾರಣ ನಾನು, ನವೀನ್, ಜನನಿ, ನರೇಂದ್ರ ಮತ್ತು ಯಶಸ್ವಿನಿಯವರ
ಸ್ನೇಹಿತರು ಸೇರಿ ಕೈಲಾದಷ್ಟು ಸ್ವಚ್ಛತೆ ಮಾಡಿ ಇವತ್ತು ಗುರು ಪೂರ್ಣಿಮೆ ಪ್ರಯುಕ್ತ ಹೆಚ್ಚಿನ ಭಕ್ತರು ಬರುವ ಸಾಧ್ಯತೆ ಇದ್ದ ಕಾರಣ ಅವರಿಗೆ ಪರಿಸರ ಮತ್ತು ಪ್ಲಾಸ್ಟಿಕ್ ಬಗೆಗಿನ ಅರಿವನ್ನು ಮೂಡಿಸಿ ನಮಲ್ಲಿ ಇದ್ದ ಬಟ್ಟೆ ಬ್ಯಾಗ್ ಗಳನ್ನು ಕೊಟ್ಟೆವು, ಎಲ್ಲಾ ಕೆಲಸ ಮುಗಿಸಿ ದೇವರ ದರ್ಶನ (ಕಾಡು ಮಲ್ಲೇಶರ ಮತ್ತು ನಂದಿ ) ಮುಗಿಸಿ ಮನೆಗೆ ಹೊರಡುವ ಮುಂಚೆ ನೆನ್ನೆಯ ಕಂಬದ ವಿಷಯ ಚರ್ಚೆ ಶುರುವಾಯಿತು. ತಡ ಮಾಡದೇ ಒಂದು ಭಾವುಟವನ್ನು ಅಲ್ಲೇ ಅಂಗಡಿಯಲ್ಲಿ ಖರೀದಿಸಿ ಸ್ಕೂಟರ್ ನಲ್ಲಿ ಸ್ಯಾಂಕಿ ಕೆರೆಕಡೆ ಹೊರಟೇ ಬಿಟ್ಟೇವು.
ಅಲ್ಲಿ ಗೇಟ್ ಮುಚಲಾಗಿತ್ತು, ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ಗೆ ಈ ವಿಷ್ಯ ತಿಳಿಸಿದೆವು ಅವರು ಇದಕ್ಕೆಲ್ಲ ಪರ್ಮಿಷನ್ ಇರೋಲ್ಲ ಹಾಗೆ ಹೀಗೆ ಅಂದರು ನಾವು ವಿನಯದಿಂದ ಅವರಲ್ಲಿ ಮನವಿ ಮಾಡಿಕೊಂಡಾಗ ಅವರು ಮೇಲಧಿಕಾರಿಗಳಿಗೆ ಕರೆಮಾಡಿ ನಮಗೆ ಮಾತನಾಡಲು ಕೊಟ್ಟರು ಅವರಿಗೆ ಕನ್ನಡ ಭಾವುಟದ ಬಗ್ಗೆ ತಿಳಿಸಿ ಅರಿವು ಮೂಡಿಸಿದ ನಂತರ ಬಾವುಟವನ್ನು ಹಾಕಲು ಒಪ್ಪಿದರು ಮತ್ತೆ ಸೆಕ್ಯೂರಿಟಿ ಗಾರ್ಡ್ ನವರು ಅಸೋಸಿಯೇಷನ್ ಇದೆ ಅವರಿಗೂ ಒಂದು ಮಾತು ತಿಳಿಸಿಬಿಡಿ ಅಂದಾಗ ಮತ್ತೆ
ಅವರೇ ಅವರ ಮೊಬೈಲ್ ಇಂದ ಕಾಲ್ ಮಾಡಿ ಮಾತನಾಡಲು ಕೊಟ್ಟರು ಅವರಿಗೂ ಕನ್ನuಡ ಭಾವುಟದ ಬಗ್ಗೆ ತಿಳಿಸಿ ಅರಿವು ಮೂಡಿಸಿದ ನಂತರ ಬಾವುಟವನ್ನು ಹಾಕಲು ಒಪ್ಪಿದರು ಮತ್ತೆ ಕಾನೂನಿನ ತೊಡಕು ಬಗ್ಗೆ ಕೇಳಿದರು ಕರ್ನಾಟಕದಲ್ಲಿ ಕನ್ನಡ ಭಾವುಟ ಸಾರ್ವಜನಿಕ ಸ್ಥಳದಲ್ಲಿ ಹಾರಿಸಬಹುದು ಅಂತ ಹೇಳಿ ನಾವು ತೆಗೆದುಕೊಂಡು ಭಾವುಟವನ್ನು ಖಾಲಿ ಇದ್ದ ಕಂಬಕ್ಕೆ ದಾರದ ಸಹಾಯದಿಂದ ನಮ್ಮ ನಾಡಿನ ಹೆಮ್ಮೆಯ ಭಾವುಟ ಹಳದಿ-ಕೆಂಪು ಭಾವುಟವನ್ನು ಹಾರಿಸಿಯೇ ಬಿಟ್ಟೆವು ಇದು ಇಲ್ಲಿಗೆ ನಿಲ್ಲಬಾರದು ಎಲ್ಲೇ ಖಾಲಿ, ಹರಿದ ಕನ್ನಡ ಭಾವುಟ ಕಂಡರೆ ಯಾರಪ್ಪನ ಅನುಮತಿಯು ಬೇಕಿಲ್ಲ ಧೈರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸಿ.
ನಮ್ಮ ಭಾವುಟ ನಮ್ಮ ಹೆಮ್ಮೆ💛❤️
ಜೈ ಕರ್ನಾಟಕ,ಜೈ ಕನ್ನಡ❤️💛